ರಾಜ್ಯ ಲಾಕ್ ಡೌನ್ ಸಮೀಕ್ಷೆ: ರಾಜ್ಯದಲ್ಲಿ 10 ಕೆಲಸಗಾರರ ಪೈಕಿ ಏಳು ಜನರ ಉದ್ಯೋಗಕ್ಕೆ ಕುತ್ತು!
ಕೋವಿಡ್-19 ಲಾಕ್ ಡೌನ್ ವೇಳೆಯಲ್ಲಿ ರಾಜ್ಯದಲ್ಲಿ 10 ಕೆಲಸಗಾರರ ಪೈಕಿಯಲ್ಲಿ ಏಳು ಮಂದಿ (ಶೇ. 72) ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಹತ್ತು ನಾಗರಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಜಿಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.