Loksabha Poll 2019

ಮಂಡ್ಯ: ಸುಮಲತಾ ಅಂಬರೀಷ್ ಜಯಭೇರಿ, ನಿಖಿಲ್ ಎಲ್ಲೀದ್ದಿಯಪ್ಪಾ? ಬಿಜೆಪಿ ವ್ಯಂಗ್ಯ
ಕರ್ನಾಟಕ ಬಿಜೆಪಿ ಟ್ವಿಟರ್ ಪುಟದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಹೇಳುವ ಮೂಲಕ ವ್ಯಂಗ್ಯವಾಡಲಾಗಿದೆ. ಇದಕ್ಕೆ ಬಿಜೆಪಿ ಅಭಿಮಾನಿಗಳು ಟ್ರೋಲ್ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಚಾಮರಾಜನಗರ: ಗುರು - ಶಿಷ್ಯರ ರೋಚಕ ಹಣಾಹಣಿಯಲ್ಲಿ ಪ್ರಸಾದ್ ಗೆ ಗೆಲುವು
ಅಂತಿಮ ಸುತ್ತಿನ ಮತ ಎಣಿಕೆ ವರೆಗೂ ರೋಚಕ ಹಣಾಹಣಿ ಏರ್ಪಟ್ಟಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ 341 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ, ಮೋದಿಗೆ ಅಭಿನಂದನೆ: ಕುಮಾರಸ್ವಾಮಿ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಹಿನ್ನೆಡೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಫಲಿತಾಂಶ ಅನಿರೀಕ್ಷಿತ ಎಂದಿದ್ದಾರೆ.

'ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು'- ಸುಮಲತಾ ಅಂಬರೀಷ್
ತೀವ್ರ ಕುತೂಹಲ ಕೆರಳಿಸಿದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು ಎಂದಿದ್ದಾರೆ.

ಗಾಂಧಿನಗರ: 5 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅಮಿತ್ ಶಾ ಜಯಭೇರಿ
ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾರಿ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಎಲ್ಲೆಲ್ಲೂ ಕೇಸರಿ ಗರ್ಜನೆ, ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ- ನವರಸ ನಾಯಕ ಜಗ್ಗೇಶ್ ಟ್ವೀಟ್
ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆ
2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದು ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಲೋಕಸಭಾ ಸಮರ: ಏ.18, 23 ರಂದು ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ
ಏಪ್ರಿಲ್ 18 ಹಾಗೂ 23 ರಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಮಿತ್ರ ಪಕ್ಷಗಳ ಕುರಿತ ಬಿಜೆಪಿ ಧೋರಣೆ ಬದಲಾಗಿದ್ದೇ ಮೈತ್ರಿಗೆ ಕಾರಣ: ಉದ್ಧವ್ ಠಾಕ್ರೆ
ಬಿಜೆಪಿ ಈಗ ಮೈತ್ರಿ ಮತ್ತು ಮಿತ್ರ ಪಕ್ಷಗಳನ್ನು ನೋಡುತ್ತಿರುವ ಮನೋಭಾವ ಬದಲಿಸಿಕೊಂಡಿದ್ದೇ ಮೈತ್ರಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

