ವಿಶೇಷಕನ್ನಡ ಮಾಧ್ಯಮ ಶಾಲೆಯಿಂದ ನಾಸಾ'ವರೆಗೆ; ರಾಜ್ಯದ ದಿನೇಶ್ ವಸಂತ್ ಹೆಗಡೆ ಸಾಧನೆ!
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ಥಿಕ ನೆರವು ನೀಡುವ ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಪ್ಯೂಚರ್ ಇನ್ವೆಷ್ಟಿಗೇಟರ್ಸ್ ಕಠಿಣ ಸ್ಪರ್ಧೆಯಲ್ಲಿ ತಮ್ಮ ಹಳ್ಳಿಯ ಹುಡುಗ ದಿನೇಶ್ ವಸಂತ್ ಹೆಗಡೆ ವಿಜೇತರಾದ ನಂತರ ಸಿದ್ಧಾಪುರ ತಾಲೂಕಿನ ಸಸಿಗುಳಿ ಗ್ರಾಮದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ.