ಸಿನಿಮಾ ಸುದ್ದಿಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟ ನಟ ಲಿಖಿತ್ ಕುಮಾರ್; 'ವೃತ್ತ' ಚಿತ್ರೀಕರಣ ಪೂರ್ಣ
ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವ ನಟ ಲಿಖಿತ್ ಕುಮಾರ್ ತಮ್ಮ ಮುಂಬರುವ ಚಿತ್ರ 'ವೃತ್ತ'ದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.