ದೇಶಅಮೆರಿಕಾದ ಪ್ರತಿಷ್ಠಿತ 'ಲೀಜನ್ ಆಫ್ ಮೆರಿಟ್' ಪ್ರಶಸ್ತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಪ್ರತಿಷ್ಠಿತ ಲೀಜನ್ ಆಫ್ ಆಫ್ ಮೆರಿಟ್ ಪ್ರಶಸ್ತಿ ನೀಡಿ ತಮ್ಮನ್ನು ಗೌರವಿಸಲಾಗಿದ್ದು, ಅಮೆರಿಕಾ- ಭಾರತ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ತಮ್ಮ ದೃಢ ನಿಶ್ಚಯ ಹಾಗೂ ಬದ್ಧತೆಯೊಂದಿಗೆ ಅಮೆರಿಕಾ ಸರ್ಕಾರ ಹಾಗೂ ಇತರ ಪಾಲುದಾರರೊಂದಿಗೆ ಕಾರ್ಯವನ್ನು ಮುಂದುವರೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.