ರಾಜ್ಯದಾಖಲೆ ನಿರ್ಮಿಸಿದ ಕಾನೂನು ಪ್ರಾಧಿಕಾರ, ಸೌಹಾರ್ದಯುತವಾಗಿ 14.8 ಲಕ್ಷ ಕೇಸುಗಳು ಇತ್ಯರ್ಥ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) ರಾಜ್ಯಾದ್ಯಂತ ನಡೆಸಿದ ಲೋಕ ಅದಾಲತ್ನಲ್ಲಿ 14.72 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರೊಂದಿಗೆ ಕೆಎಸ್ಎಲ್ಎಸ್ಎ ಹೊಸ ದಾಖಲೆ ನಿರ್ಮಿಸಿದ್ದು, ಒಂದೇ ದಿನದಲ್ಲಿ ಸೌಹಾರ್ದಯುತವಾಗಿ ಅತಿ ಹೆಚ್ಚು ಪ್ರಕರಣಗಳ ಇತ್ಯರ್ಥದಲ್ಲಿ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ.