ದೇಶಎಡಪಕ್ಷಗಳ ಆಡಳಿತವಿರುವ ಕೇರಳವೂ ದೂರವಿಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿ ಅಲ್ಲಿ ಸರ್ಕಾರ ರಚಿಸುತ್ತದೆ: ಪ್ರಧಾನಿ ಮೋದಿ
ನಿನ್ನೆ ಗುರುವಾರ ಪ್ರಕಟವಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿರುವ ವಿಧಾನಸಭಾ ಫಲಿತಾಂಶದಿಂದ ಉತ್ತೇಜಿತರಾಗಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ದಿನಗಳಲ್ಲಿ ಅದೇ ಮಾದರಿಯಲ್ಲಿ ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲೂ ಬಿಜೆಪಿ ಮೈತ್ರಿ ಸರಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.