ರಾಜ್ಯದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ: ಹಲವು ಕಡೆಗಳಲ್ಲಿ ಭೂಕುಸಿತ
ಕಳೆದೊಂದು ವಾರದಿಂದ ಬಿಟ್ಟೂಬಿಡದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ನಿನ್ನೆ ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ಸತತ ಮಳೆಯಿಂದಾಗಿ ಹಲವೆಡೆ ಸಾಕಷ್ಟು ಅವಘಡಗಳು, ಹಾನಿ ಸಂಭವಿಸಿವೆ. ಹಲವೆಡೆ ಭೂಕುಸಿತ, ಮರಗಳು ಧರೆಗುರುಳಿದ್ದು, ಮಳೆ ನೀರು ಹಲವು ಕಡೆಗಳಲ್ಲಿ ಮನೆಯೊಳಗೆ ನುಗ್ಗಿವೆ.