ರಾಜ್ಯಕಾರ್ಮಿಕರು, ಭೂಮಿಯ ಸಂಬಂಧಿ ಕಾನೂನು ಮತ್ತಷ್ಟು ಸರಳೀಕರಣ: ಜಗದೀಶ್ ಶೆಟ್ಟರ್
ಲಾಕ್ಡೌನ್ನಿಂದಾಗಿ ಲಕ್ಷಾಂತರ ಕೋಟಿ ರೂ, ನಷ್ಟ ಅನುಭವಿಸಿದ್ದ ಕೈಗಾರಿಕಾ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಗಳ ಹೂಡಿಕೆ ಗುರಿಯನ್ನು ಹೊಂದಿದ್ದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅಲ್ಲದೆ ಇದೇ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿರುವುದಾಗಿ ಸಹ ಅವರು ಭರವಸೆ ನೀಡಿದ್ದಾರೆ.