ರಾಜ್ಯಬೀಜ ನಿಗಮದಲ್ಲಿನ 'ಗುತ್ತಿಗೆ ಕಾರ್ಮಿಕರ ನೇಮಕಾತಿ' ಅಕ್ರಮ ತನಿಖೆ ಮಾಡಿ: ಸಿಎಜಿಗೆ ಹೈಕೋರ್ಟ್ ಆದೇಶ
ಕೃಷಿ ಇಲಾಖೆ ಅಧೀನದಲ್ಲಿರುವ 'ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ' (ಕೆಎಸ್ಎಸ್ಸಿಎಲ್) ಗುತ್ತಿಗೆ ಕಾರ್ಮಿಕರನ್ನು ಹೇಗೆ ನೇಮಕ ಮಾಡಿಕೊಳ್ಳುತ್ತಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ನಿಯಂತ್ರಣಾಧಿಕಾರಿ ಮತ್ತು ಮಹಾ ಲೆಕ್ಕ ಪರಿಶೋಧಕರಿಗೆ (ಸಿಎಜಿ) ಹೈಕೋರ್ಟ್ ನಿರ್ದೇಶನ ನೀಡಿದೆ.