ರಾಜ್ಯKRS ನಲ್ಲಿ ಚಿರತೆ ಕಣ್ಣಾಮುಚ್ಚಾಲೆ; 15 ದಿನಗಳಿಂದ ಬೃಂದಾವನ ಬಂದ್, ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ಆಕ್ರೋಶ!
ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಒಂದಾದ ಕೆಆರ್ಎಸ್ ಬೃಂದಾವನ ಗಾರ್ಡನ್ ಚಿರತೆ ಹಾವಳಿಯಿಂದಾಗಿ ಕಳೆದ 15 ದಿನಗಳಿಂದ ಬಂದ್ ಆಗಿದ್ದು, ಅರ್ಧ ತಿಂಗಳೇ ಕಳೆದರೂ ಚಿರತೆಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.