ರಾಜ್ಯಚುನಾವಣೆಯೇ ಹಬ್ಬ: 180 ಜನರಿರುವ ಈ ಕುಟುಂಬದಲ್ಲಿ 96 ಮತದಾರರು!
ಹುಬ್ಬಳ್ಳಿಯ ಕುಟುಂಬವೊಂದರಲ್ಲಿ 96 ಮತದಾರರು ಇದ್ದಾರೆ! ಹೌದು, ಧಾರವಾಡ ಜಿಲ್ಲೆಯ ನೂಲ್ವಿ ಗ್ರಾಮದ ಕೊಪ್ಪದ ಕುಟುಂಬವನ್ನು ಯಾವ ರಾಜಕೀಯ ಪಕ್ಷವೂ ಕಡೆಗಣಿಸಲು ಸಾಧ್ಯವಿಲ್ಲ. ಏಕೆಂದರೆ, 180 ಸದಸ್ಯರ ಈ ಬೃಹತ್ ಕುಟುಂಬವು 96 ಅರ್ಹ ಮತದಾರರನ್ನು ಒಳಗೊಂಡಿದೆ.