ರಾಜ್ಯಕೋಳಿಪಾಳ್ಯ ಮನೆಯೊಂದರಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ!
ನಾಗರಾಜ ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯದಲ್ಲಿ ನಡೆದಿದೆ. ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ವೃದ್ಧ ದಂಪತಿ ಪರಾರಿಯಾಗಿದ್ದಾರೆ.