ರಾಜಕೀಯಕೋಲಾರ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ: ರಾಹುಲ್ ಗಾಂಧಿ ರ್ಯಾಲಿ ಮೇಲೆ ಹೊಡೆತ
ಚಿನ್ನದ ನಾಡು ಕೋಲಾರ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ, ಕಚ್ಚಾಟಗಳಿರುವುದರಿಂದ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜೈ ಭಾರತ್ ರ್ಯಾಲಿ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಫಲ ನೀಡುವ ಸಾಧ್ಯತೆಗಳು ಕಡಿಮೆ. ಇಲ್ಲಿ ಎರಡು ಬಣಗಳಿದ್ದು, ಬಣಗಳ ನಡುವಿನ ಶೀತಲ ಸಮರ ಪಕ್ಷಕ್ಕೆ ನಷ್ಟವನ್ನುಂಟುಮಾಡುವ ಸಾಧ್ಯತೆಗಳೇ ಹೆಚ್ಚು.