ರಾಜ್ಯಅನ್ನಭಾಗ್ಯ ಯೋಜನೆ ತಂದಿಟ್ಟ ಸಂಕಷ್ಟ: ಅಕ್ಕಿ ಇಲ್ಲ ಎಂದ ತೆಲಂಗಾಣ, ಛತ್ತೀಸ್ಗಢದತ್ತ ಮುಖ ಮಾಡಿದ ರಾಜ್ಯ ಸರ್ಕಾರ!
ಗ್ಯಾರಂಟಿ ಯೋಜನೆಗಳ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ತರುವುದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕಕ್ಕೆ ನೀಡಲು ಅಗತ್ಯವಿರುವಷ್ಟು ಗುಣಮಟ್ಟದ ಅಕ್ಕಿಯ ದಾಸ್ತಾನು ಇಲ್ಲ ಎಂದು ನೆರೆಯ ತೆಲಂಗಾಣ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ್ದು, ಇದೀಗ ಸರ್ಕಾರ ಛತ್ತೀಸ್ಗಢದತ್ತ ಮುಖ ಮಾಡಿದೆ.