ಸಿನಿಮಾ ಸುದ್ದಿಆದಿತ್ಯ, ರಂಜನಿ ರಾಘವನ್ ಅಭಿನಯದ 'ಕಾಂಗರೂ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ನಟ ಆದಿತ್ಯ ಮತ್ತು ರಂಜನಿ ರಾಘವನ್ ಅಭಿನಯದ ಕಾಂಗರೂ ಚಿತ್ರವು ಮೇ 3ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಕಿಶೋರ್ ಮೇಗಳಮನೆ ನಿರ್ದೇಶನದ ಈ ಚಿತ್ರವನ್ನು ಆರೋಹಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆರು ಸ್ನೇಹಿತರು ಒಟ್ಟಾಗಿ ನಿರ್ಮಿಸಿದ್ದಾರೆ.