Khaki underwear

ಖಾಕಿ ಅಂಡರ್ ವೇರ್ ವಿವಾದ: ಅಜಂಖಾನ್ ಗೆ ಮಹಿಳಾ ಆಯೋಗ ತೀವ್ರ ತರಾಟೆ!
ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ಧ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಮಾಡಿರುವ ಖಾಕಿ ಅಂಡರ್ ವೇರ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನಿಮ್ಮ ಟೀಕೆಗೆ ಹೆದರಿ ಓಡಿ ಹೋಗುವವಳು ನಾನಲ್ಲ: ಅಜಂಖಾನ್ ವಿರುದ್ಧ ಜಯಪ್ರದಾ ಆಕ್ರೋಶ
ಸಮಾಜವಾದಿ ಮುಖಂಡ ಅಜಂಖಾನ್ ರ 'ಖಾಕಿ ಅಂಡರ್ ವೇರ್' ಹೇಳಿಕೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದ ಈ ಸಂಬಂಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಖಾಕಿ ಅಂಡರ್ ವೇರ್ ಹೇಳಿಕೆ: ಎಸ್ ಪಿ ಮುಖಂಡ ಅಜಂಖಾನ್ ಗೆ ಮತ್ತೊಂದು ಸಂಕಷ್ಟ, ಎಫ್ ಐಆರ್ ದಾಖಲು
ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ 'ಖಾಕಿ ಅಂಡರ್ ವೇರ್' ಪದ ಬಳಕೆ ಮಾಡಿ ವಿವಾದಕ್ಕೆ ಕಾರಣವಾಗಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ.

ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಾರೆ; ಅಜಂಖಾನ್ ಹರಕುಬಾಯಿಯ ಕೊಳಕು ಮಾತು
ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕೀಳುಮಟ್ಟದ ಟೀಕೆ ಮಾಡಿದ್ದು, ಜಯಪ್ರದ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಖಾಕಿ ಅಂಡರ್ ವೇರ್ ಹೇಳಿಕೆ; ಎಸ್ ಪಿ ಮುಖಂಡರ ಮೌನ ಖಂಡನೀಯ ಎಂದ ಸ್ಮೃತಿ ಇರಾನಿ
ನಟಿ ಜಯಪ್ರದ ವಿರುದ್ಧ ಎಸ್ ಪಿ ಮುಖಂಡ ಅಜಂಖಾನ್ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದು, ಮಹಿಳೆ ಕುರಿತ ಅವಹೇಳನಕಾರಿ ಹೇಳಿಕೆ ಹೊರತಾಗಿಯೂ ಎಸ್ ಪಿ ಮುಖಂಡರ ಮೌನ ಖಂಡನೀಯ ಎಂದು ಹೇಳಿದ್ದಾರೆ.

ಖಾಕಿ ಅಂಡರ್ ವೇರ್ ಹೇಳಿಕೆ: ನನ್ನದೇ ತಪ್ಪು ಎಂದಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ- ಅಜಂ ಖಾನ್
ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಮರ್ಥನೆ ನೀಡಿದ್ದು, ನಾನು ಮಾಡಿದ್ದು ತಪ್ಪು ಎಂದು ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ.

