ರಾಜ್ಯಕೆಜಿಎಫ್ ಕೈಗಾರಿಕಾ ಸಂಕೀರ್ಣ ಕುರಿತು ಸಮೀಕ್ಷೆ ನಡೆಸಿ: ಅಧಿಕಾರಿಗಳಿಗೆ ಸಚಿವ ಮುರುಗೇಶ್ ನಿರಾಣಿ ಸೂಚನೆ
ಕೋಲಾರ ಗೋಲ್ಡ್ ಫೀಲ್ಡ್ಸ್ನಲ್ಲಿ (ಕೆಜಿಎಫ್) ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ಗೆ (ಬಿಜಿಎಂಎಲ್) ಸೇರಿದ ಸುಮಾರು 3,000 ಎಕರೆಗೂ ಹೆಚ್ಚು ಬಳಕೆಯಾಗದ ಭೂಮಿ ಕುರಿತು ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.