Kerala Driver

ಶಿರೂರು ಗುಡ್ಡ ಕುಸಿತ: 72 ದಿನಗಳ ನಂತರ ಕೇರಳದ ಚಾಲಕ ಅರ್ಜುನ್ ಮೃತದೇಹ ಪತ್ತೆ
ಗುಡ್ಡ ಕುಸಿತದಲ್ಲಿ 11 ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಆ ಪೈಕಿ 8 ಮಂದಿ ಮೃತದೇಹ ಪತ್ತೆಯಾಗಿತ್ತು. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು.

ಶಿರೂರು: ನಾಪತ್ತೆಯಾಗಿದ್ದ ಕೇರಳ ಚಾಲಕನ ಲಾರಿ ಭಾಗಗಳು ಪತ್ತೆ; ಶೋಧ ತಂಡಕ್ಕೆ ಹೊಸ ಭರವಸೆ
ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗಂಗಾವಳಿ ನದಿಯಲ್ಲಿ ಪರಿಶೀಲಿಸಿದಾಗ ಗ್ಯಾಸ್ ಟ್ಯಾಂಕರ್‌ನ ಸ್ವಲ್ಪ ಭಾಗ ಪತ್ತೆಯಾಗಿದೆ.

ಶಿರೂರು ಭೂಕುಸಿತ: ಕೇರಳದ ಅರ್ಜುನ್‌ಗಾಗಿ ಮುಂದುವರೆದ ಹುಡುಕಾಟ, ನಿಧಾನ ಕಾರ್ಯಾಚರಣೆಗೆ ಅಸಮಾಧಾನ
ಜುಲೈ 16 ರಂದು ನಮ್ಮ ಸಹೋದರ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ತಿಳಿಸಲಾಯಿತು. ಆದರೆ, ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಇಷ್ಟು ವಿಳಂಬವಾದರೆ ನಾವು ಯಾವ ಭರವಸೆ ಇಟ್ಟುಕೊಳ್ಳಬೇಕು.

ಅಂಕೋಲಾ ಗುಡ್ಡ ಕುಸಿತ: ಇಂದು ಮತ್ತೊಂದು ಮೃತದೇಹ ಪತ್ತೆ; ಕೇರಳದ ಲಾರಿ ಚಾಲಕ ಸೇರಿ ಮೂವರ ಪತ್ತೆಗಾಗಿ ಶೋಧ ಮುಂದುವರಿಕೆ!
ಕೇರಳದ ಕೋಝಿಕ್ಕೋಡ್‌ನ ಲಾರಿ ಚಾಲಕ ಅರ್ಜುನ್ ಎಂದು ತಿಳಿದುಬಂದಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಈ ಮಧ್ಯೆ ರಸ್ತೆ ಪುನಃಸ್ಥಾಪನೆ ಕಾರ್ಯವು ನಡೆಯುತ್ತಿದೆ.

