Keddasa

ಭೂಮಿತಾಯಿ ರಜಸ್ವಲೆಯಾಗುವ ಹಬ್ಬ ತುಳುನಾಡ ಸಂಸ್ಕೃತಿ ಕೆಡ್ಡಸ
ತುಳು ನಾಡಿನ ಜನರು ಮೂಲತಃ ದೈವ ಮತ್ತು ಪ್ರಕೃತಿ ಆರಾಧಕರು, ಇಲ್ಲಿನ ಮಂದಿ ಕೃಷಿಯನ್ನು ಜೀವನಕ್ಕೆ ಅವಲಂಬಿಸಿರುವವರು. ಕೃಷಿಗೂ ಪ್ರಕೃತಿ ಮಾತೆಗೂ ಬಿಡಿಸಲಾರದ ನಂಟು. ಮೂಲತಃ ಕೃಷಿಕರಾಗಿರುವ ತುಳುಮಂದಿಯ ಹಬ್ಬಗಳು ಕೃಷಿ ಆಧಾರಿತ ಹಿನ್ನೆಲೆಯಲ್ಲಿ ಆಚರಿಸಲ್ಪತ್ತದೆ.

ಭೂಮಿ ತಾಯಿ ರಜಸ್ವಲೆಯಾಗುವ ಹಬ್ಬ 'ಕೆಡ್ಡಸ'
ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಲ್ಲಿದೆ. ಆ ದಿನವೇ ಕೆಡ್ಡಸ. ಇದೊಂದು ಜನಪದ...

