ರಾಜ್ಯಕೋಲಾರ: ಮೂಲಭೂತ ಸೌಕರ್ಯ ಕೊರತೆ, ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಕೆಲವೆಡೆ ಮೂಲಭೂತ ಸೌಕರ್ಯ ಕೊರತೆಯಿಂದ ಮತದಾನ ಬಹಿಷ್ಕರಿಸುವ ಘಟನೆಗಳು ವರದಿಯಾಗಿದೆ. ಕೋಲಾರ ತಾಲೂಕಿನ ಕೆ.ಬಿ. ಹೊಸಹಳ್ಳಿ ಗ್ರಾಮದ ಜನರು ಚುನಾವಣೆ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.