ವಿಶೇಷಗ್ರಾಮಗಳಲ್ಲಿ ಕಣ್ಮರೆಯಾಗುತ್ತಿವೆ 'ಹರಟೆ ಕಟ್ಟೆ': ಮರುಜೀವ ನೀಡಲು INTACH ಮುಂದು!
ಹಿಂದೆಲ್ಲಾ ಒತ್ತಡ ನಿವಾರಿಸಲು ಹರಟೆ ಕಟ್ಟೆಗಳಿರುತ್ತಿದ್ದವು. ‘ಊರಿಗೊಂದು ಹನುಮಪ್ಪನ ಗುಡಿ’ ಅನ್ನುವ ಹಾಗೆ ಹಳ್ಳಿಗೊಂದು ಅರಳಿಕಟ್ಟೆ ಇದ್ದೇ ಇರುತ್ತಿತ್ತು. ಹಳ್ಳಿಯ ಕಟ್ಟೆಗಳು ಕೇವಲ ಕಲ್ಲುಮಣ್ಣಿನ ಕಟ್ಟೆಗಳಾಗಿರಲಿಲ್ಲ. ಪ್ರತಿದಿನ ಒಂದೊಂದು ಸಮಯಕ್ಕೆ ಅವು ಜೀವ ತಳೆಯುತ್ತಿದ್ದವು.