ದೇಶಅಭಿವೃದ್ಧಿಗಾಗಿ ಕಾಶ್ಮೀರದ ಯುವ ಜನರೊಂದಿಗೆ ಮಾತುಕತೆ: ಪಾಕ್ ಜೊತೆ ಚರ್ಚೆ ಮಾಡಿ ಎಂದ ಫಾರೂಖ್ ಅಬ್ದುಲ್ಲಾಗೆ ಅಮಿತ್ ಶಾ ತಿರುಗೇಟು
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಕೋರುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿನ ಅತ್ಯಂತ ಪ್ರಮುಖವಾದ ಪ್ರದೇಶವಾಗಿ ಇದನ್ನು ಅಭಿವೃದ್ಧಿಪಡಿಸಲು ಜಮ್ಮು-ಕಾಶ್ಮೀರದ ಯುವಕರೊಂದಿಗೆ ಸರ್ಕಾರ ಮಾತನಾಡಲು ಬಯಸುತ್ತದೆ ಎಂದಿದ್ದಾರೆ.