ವಿದೇಶಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಗೆ ಆಹ್ವಾನ: ಇಮ್ರಾನ್ ಖಾನ್ ಗೂಗ್ಲಿ ಬಗ್ಗು ಬಡಿದ ಮನಮೋಹನ್ ಸಿಂಗ್
ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ನೀಡಿ ಭಾರತಕ್ಕೆ ಮುಜುಗರ ಉಂಟು ಮಾಡಲು ಯತ್ನಿಸಿದ್ದ ಪಾಕಿಸ್ತಾನಕ್ಕೆ ಮನಮೋಹನ್ ಸಿಂಗ್ ಖಡಕ್ ತಿರಗೇಟು ನೀಡಿದ್ದು, ಪಾಕಿಸ್ತಾನ ಸರ್ಕಾರದ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ.