Karntaka politics

ಕಾಂಗ್ರೆಸ್‌ನ ವಂಶಾಡಳಿತ ವಿರುದ್ಧ ಹೋರಾಡಬೇಕಾದ್ರೆ ರಾಜ್ಯ ಬಿಜೆಪಿಯಲ್ಲಿ ತಂದೆ, ಮಗನ ಕಿತ್ತೊಗೆಯಬೇಕು: ಯತ್ನಾಳ್
ಉತ್ತರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಆಂಧ್ರಪ್ರದೇಶಗಳು ಈಗ ಹಿಂದುತ್ವದತ್ತ ವಾಲುತ್ತಿರುವ ಕಾರಣ ನಮ್ಮ ಪಕ್ಷವು ಹೊಂದಾಣಿಕೆ ರಾಜಕಾರಣ, ಬ್ರಹ್ಮಾಂಡ ಭ್ರಷ್ಟಾಚಾರ, ವಂಶಾಡಳಿತ ರಾಜಕಾರಣದ ಕಪಿಮುಷ್ಠಿಯಿಂದ ಹೊರಬರಬೇಕು. ಅಲ್ಲದೆ ಹಿಂದುತ್ವದ ಪರ ಧ್ವನಿ ಗಟ್ಟಿಯಾಗಬೇಕು ಎಂದು ತಮ್ಮ ಪತ್ರದಲ್ಲಿ ಬರೆದಿರುವುದಾಗಿ ಹೇಳಿದರು.

ಮೇಲ್ಮನೆಗೆ ನಾಮಕರಣ: ಬಾಗಲಕೋಟೆ ಜಿಲ್ಲೆಗೊಂದು ಸ್ಥಾನ ಸಿಗುವುದು ಡೌಟ್
ಮಹಾಮಾರಿ ಕೊರೋನಾ ಅಬ್ಬರದ ಮಧ್ಯೆಯೇ ಸದ್ದುಗದ್ದಲವಿಲ್ಲದೆ ಮೇಲ್ಮನೆಗೆ ನೂತನ ಸದಸ್ಯರ ನೇಮಕ ಪ್ರಕ್ರಿಯೆ ಕೇಸರಿ ಪಾಳೆಯದಲ್ಲಿ ಜೋರಾಗಿ ನಡೆದಿದ್ದು, ಬಾಗಲಕೋಟೆ ಜಿಲ್ಲೆಗೂ ಒಂದು ಸ್ಥಾನ ಸಿಕ್ಕಲ್ಲಿ ಅದೃಷ್ಟವೇ ಸರಿ.

ನನ್ನ ಚಾರಿತ್ರ್ಯ ವಧೆಗೆ ಯತ್ನಿಸುವ ಮುನ್ನ ನಿಮ್ಮ ಹಿನ್ನಲೆ ನೋಡಿಕೊಳ್ಳಿ: ಸ್ಪೀಕರ್ ರಮೇಶ್ ಕುಮಾರ್ ಕಿಡಿ
ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ...

ವಿಶ್ವಾಸ ಮತಕ್ಕೆ ರಾಜ್ಯಪಾಲರ ಗಡುವು ಪಾಲಿಸುವುದೂ, ಬಿಡುವುದು ಸಿಎಂಗೆ ಬಿಟ್ಟದ್ದು: ಸ್ಪೀಕರ್ ರಮೇಶ್ ಕುಮಾರ್
ವಿಶ್ವಾಸ ಮತ ಯಾಚನೆ ಸಂಬಂಧ ರಾಜ್ಯಪಾಲರು ನೀಡಿರುವ ಅಂತಿಮ ಗಡುವನ್ನು ಪಾಲನೆ ಮಾಡುವುದು, ಬಿಡುವುದು ಸಿಎಂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ದೋಸ್ತಿ ಸರ್ಕಾರದ ಅಳಿವು...? ಉಳಿವು..? ಇಂದು ಸಿಎಂ ಎಚ್ಡಿಕೆ 'ವಿಶ್ವಾಸ' ಪರೀಕ್ಷೆ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಕರ್ನಾಟಕ ರಾಜಕೀಯ ಬಿಕ್ಕಟ್ಟು: 'ವಿಶ್ವಾಸ'ಕ್ಕೆ ಕ್ಷಣಗಣನೆ, 'ಅತೃಪ್ತ'ರ ಅನರ್ಹಕ್ಕೆ ಕಾಂಗ್ರೆಸ್ ಮನವಿ
ರಾಮಲಿಂಗಾ ರೆಡ್ಡಿ ಅವರನ್ನು ಹೊರತು ಪಡಿಸಿ ಉಳಿದೆಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕೈ ನಾಯಕರು ದಾಖಲೆ ಸಹಿತ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ: ಮುಕುಲ್ ರೋಹ್ಟಗಿ
ನಾಳಿನ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಹೇಳಿದ್ದಾರೆ.

ಕರ್ನಾಟಕ ಉಪಚುನಾವಣೆ: 2 ವಿಧಾನಸಭಾ ಕ್ಷೇತ್ರಗಳಲ್ಲಿ 11 ಗಂಟೆ ವೇಳೆಗೆ ಶೇ.21.5 ರಷ್ಟು ಮತದಾನ
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೂ ಶೇ.21.5ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

