Karnataka vs TamilNadu

ನಗರದಲ್ಲಿ ಶಾಂತಿಯುತ ಬಂದ್; 3 ಬಿಜೆಪಿ ಶಾಸಕರು ಸೇರಿ 1000 ಕ್ಕೂ ಹೆಚ್ಚು ಜನರ ಬಂಧನ, ಬಿಡುಗಡೆ: ಪೊಲೀಸ್ ಕಮಿಷನರ್ ಬಿ ದಯಾನಂದ
ಕಾವೇರಿಗಾಗಿ ಮಂಗಳವಾರ ನಡೆದ ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಬಂದ್ ವೇಳೆ 3 ಬಿಜೆಪಿ ಶಾಸಕರು ಸೇರಿದಂತೆ 1000 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.

ಬೆಂಗಳೂರು ಬಂದ್ ಎಫೆಕ್ಟ್: ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್; ರಸ್ತೆಗಳು ನಿರ್ಜನ
ಕಾವೇರಿ ನದಿ ನೀರಿಗಾಗಿ ರೈತಪರ ಸಂಘಟನೆಗಳು ಕರೆಕೊಟ್ಟಿದ್ದ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್ ಗೆ ಸೂಚಿಸಲಾಗಿತ್ತು.

'ಕಾವೇರಿಗಾಗಿ' ನಡೆದ ಬೆಂಗಳೂರು ಬಂದ್ ಬಹುತೇಕ ಯಶಸ್ವಿ; ಮಾರುಕಟ್ಟೆ, ವಾಣಿಜ್ಯ ಸಂಸ್ಥೆಗಳಿಂದ ಬೆಂಬಲ
ಕಾವೇರಿ ನೀರು ಉಳಿವಿಗಾಗಿ ನಿನ್ನೆ ನಡೆದ ಬೆಂಗಳೂರು ಬಂದ್ ಬಹುತೇಕ ಯಶಸ್ವಿಯಾಗಿದ್ದು, ಮಾರುಕಟ್ಟೆ, ವಾಣಿಜ್ಯ ಸಂಸ್ಥೆಗಳಿಂದ ರೈತರಿಗೆ ಬೆಂಬಲ ನೀಡಿ ವಹಿವಾಟು ಸ್ಥಗಿತಗೊಳಿಸಿದ್ದವು.

ಬೆಂಗಳೂರು ಬಂದ್ ಎಫೆಕ್ಟ್: 13 ವಿಮಾನ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ಕಾವೇರಿಗಾಗಿ ಮಂಗಳವಾರ ನಡೆದ ನಡೆದ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಬ್ಯಾಕ್ ಟು ಬ್ಯಾಕ್ ಬಂದ್: ದಿನಗೂಲಿ ಕಾರ್ಮಿಕರಿಗೆ ತೊಂದರೆ, ಹಮಾಲಿಗಳ ಬದುಕು ಹೈರಾಣ
ಕಾವೇರಿ ವಿಚಾರವಾಗಿ ಒಮ್ಮತಕ್ಕೆ ಬಾರದ ಕನ್ನಡಪರ ಸಂಘಟನೆಗಳು ಒಂದರ ಹಿಂದೆ ಒಂದರಂತೆ ಬಂದ್ ಕರೆ ನೀಡುತ್ತಿರುವುದು ದಿನಗೂಲಿ ಕಾರ್ಮಿಕರಿಗೆ ತೊಂದರೆಯಾಗುವಂತೆ ಮಾಡುತ್ತಿದೆ.

'ಕಾವೇರಿ' ಬಂದ್ ಗೆ ಜೆಡಿಎಸ್-ಬಿಜೆಪಿ ಬೆಂಬಲ; ರಾಜಕೀಯ ಬೇಡ ಎಂದ ಡಿಸಿಎಂ ಡಿಕೆ ಶಿವಕುಮಾರ್
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬೆಂಬಲ ನೀಡಿದ್ದು, ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಾವೇರಿ: ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ಆದೇಶ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಶಾಕ್ ನೀಡಿದ್ದು, ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಆದೇಶ ನೀಡಿದೆ.

