ವಿಶೇಷಕನ್ನಡ ಭಾಷೆ-ಸಾಹಿತ್ಯ ಸೇವೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯ
ಮನುಷ್ಯ ಆಡುವ ಮಾತು ಆತನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಭಾಷೆಯ ಬೆಳವಣಿಗೆ ಮತ್ತು ಅದರ ಬಳಕೆ ನಾಗರಿಕತೆಯ ಬೆಳವಣಿಗೆಯ ಸಂಕೇತ. ಇದನ್ನು ಧ್ಯೇಯವಾಗಿಟ್ಟುಕೊಂಡು ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯವಾಗಿ ಕಳೆದ 91 ವರ್ಷಗಳಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದೆ.