Karnataka elections

ಕರ್ನಾಟಕ ಚುನಾವಣೆ: ಸಿಎಂ ರೇಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಔಟ್
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಇದೀಗ ಮುಖ್ಯಮಂತ್ರಿ ರೇಸ್ ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಔಟ್ ಆಗಿದ್ದು, ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಶೇ.50ರಷ್ಟು ಮೀಸಲಾತಿ ಮಿತಿ ರದ್ದುಪಡಿಸಿ, ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ನೀಡಿ: ರಾಹುಲ್ ಗಾಂಧಿ
ದೇಶದಲ್ಲಿ ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕಬೇಕು. ಜಾತಿ ಗಣತಿಯನ್ನು ಸಾರ್ವಜನಿಕಗೊಳಿಸಬೇಕು. ಜಾತಿ ಗಣತಿ ಆಧಾರದ ಮೇಲ ಒಬಿಸಿಗಳಿಗೆ ಉತ್ತಮ ಪ್ರಾತಿನಿಧ್ಯ ನೀಡಬೇಕು.

ವಿಧಾನಸಭಾ ಚುನಾವಣೆ: 40-45 ಅಭ್ಯರ್ಥಿಗಳ ಕಣಕ್ಕಿಳಿಸಲು ಎನ್‌ಸಿಪಿ ಮುಂದು!
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) 40-45 ಸ್ಥಾನಗಳಲ್ಲಿ ಸ್ಪರ್ಧಿಗಿಳಿಯಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಚುನಾವಣೆ: ಇತಿಹಾಸ ಪುನರ್ ಸೃಷ್ಟಿಗೆ ಬಿಜೆಪಿ ಉತ್ಸುಕ, ಅಧಿಕಾರ ಕಸಿದುಕೊಳ್ಳುವ ತವಕದಲ್ಲಿ ಕಾಂಗ್ರೆಸ್!
ಕರ್ನಾಟಕದಲ್ಲಿ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಆಡಳಿತಾರೂಢ ಬಿಜೆಪಿ ನಾಲ್ಕು ದಶಕಗಳ ಹಳೆಯ ಇತಿಹಾಸವನ್ನು ಪುನರ್ ಸೃಷ್ಟಿಸಲಿದೆಯೇ ಅಥವಾ 2024ರ ಲೋಕಸಭಾ ಚುನಾವಣೆ ಸವಾಲು ಇರುವಂತೆಯೇ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲಿದೆಯೇ ಎಂಬುದುನ್ನು ಕಾದು ನೋಡಬೇಕಾಗಿದೆ.

ಹೊರಗಿನವರಿಗೆ ಟಿಕೆಟ್ ನೀಡಿದರೆ ಸಾಮೂಹಿಕವಾಗಿ ರಾಜೀನಾಮೆ: ಶಿವಮೊಗ್ಗ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರ ಎಚ್ಚರಿಕೆ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ನೀಡಿದರೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಶಿವಮೊಗ್ಗದ ವಿವಿಧ ವಾರ್ಡ್ಗಳ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ: ಉಡುಗೊರೆ ಫಲಾನುಭವಿಗಳ ಗುರುತಿಸಲು ಮನೆಗಳ ಮೇಲೆ ಇಂಗ್ಲಿಷ್ ಅಕ್ಷರಗಳಿಂದ ಗುರುತು!
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಹಲವಾರು ಬಡಾವಣೆಗಳ ನಿವಾಸಿಗಳು ತಮ್ಮ ಮನೆಯ ಬಾಗಿಲು, ಪೈಪ್‌ಗಳು ಮತ್ತು ಗೋಡೆಗಳ ಮೇಲೆ ಕೆಲವು ಗುರುತುಗಳನ್ನು ಕಂಡು ತಬ್ಬಿಬ್ಬಾಗಿದ್ದು ಸುಳ್ಳಲ್ಲ. ಹತ್ತಿರದಿಂದ ಪರಿಶೀಲಿಸಿ ನೋಡಿದಾಗ ಅಲ್ಲಿ ವರ್ಣಮಾಲೆಗಳಿದ್ದವು, ಪ್ರತಿಯೊಂದು ಅಕ್ಷರಗಳೂ ಮನೆಯಿಂದ ಮನೆಗೆ ಭಿನ್ನವಾಗಿದ್ದವು.

ಕ್ಷೇತ್ರ ಆಯ್ಕೆ ಗೊಂದಲ: ಮತ್ತೆ ವರಿಷ್ಠರ ಭೇಟಿಗೆ ಸಿದ್ದರಾಮಯ್ಯ ನಿರ್ಧಾರ, ಶೀಘ್ರ ದೆಹಲಿಗೆ!
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಬೇಕೇ ಇಲ್ಲವೇ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕೇ ಅಥವಾ ಎರಡೂ ಕ್ಷೇತ್ರದಿಂದ ಸ್ಪರ್ಧೆಗಿಳಿಯಬೇಕೇ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರಿಷ್ಠರ ಸಲಹೆ ಪಡೆಯಲು ನಿರ್ಧರಿಸಿದ್ದಾರೆ.

ಅವನಿಗೆ ಪ್ಯಾಂಟ್ ಬಿಚ್ಚಲು ಹೇಳಿದ್ವಾ? ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು!!: ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು
ರಾಜ್ಯದಲ್ಲಿ ಸಿಡಿ ಪ್ರಕರಣ ಮತ್ತೆ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದು, ರಮೇಶ್ ಜಾರಕಿಹೊಳಿ ಆರೋಪಗಳಿಗೆ ತಿರಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 'ಅವನಿಗೆ ಪ್ಯಾಂಟ್ ಬಿಚ್ಚಲು ಹೇಳಿದ್ವಾ? ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು' ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆಗೆ 3 ತಿಂಗಳು ಮಾತ್ರ ಇದೆ.. ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ: ರಮೇಶ್ ಜಾರಕಿಹೊಳಿ
ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

