ರಾಜ್ಯಶಿರಾದಲ್ಲಿ ಶೇ.82.13 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನ ದಾಖಲು: ಕೊರೋನಾ ಸೋಂಕಿತರಿಂದಲೂ ಮತದಾನ
ಭಾರಿ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಶಿರಾದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆರ್ ಆರ್ ನಗರದಲ್ಲಿ ಜನರು ಅತಿ ಕಡಿಮೆ ಉತ್ಸಾಹ ತೋರಿಸಿದ್ದಾರೆ.