ರಾಜ್ಯಚುನಾವಣಾ ನೀತಿ ಸಂಹಿತೆ ಬಳಿಕ ನಾಡಗೀತೆ ಬಗ್ಗೆ ಅಂತಿಮ ತೀರ್ಮಾನ: ಸಚಿವ ಸುನಿಲ್ ಕುಮಾರ್
ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ಕುಮಾರ್ ಹೇಳಿದ್ದಾರೆ.