ರಾಜ್ಯ'ಹೃದಯ ಏಸು' ಪದ ಬಳಸಿದ್ದು ಗೊತ್ತಿರಲಿಲ್ಲ, ನನಗೆ ಕೆಟ್ಟ ಹೆಸರು ತರಲು ಪ್ರತಿಭಟನೆ ಮಾಡುತ್ತಿದ್ದಾರೆ: ಸೌಮ್ಯ ರೆಡ್ಡಿ
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ 'ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ' ಎಂದಿರುವ ಸ್ಥಳದಲ್ಲಿ ಹೃದಯ ಏಸು ಎಂದು ಪ್ರಕಟಿಸಿ ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕಿ ಕೆ ಸೌಮ್ಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.