ರಾಜ್ಯಮೈಸೂರು: ಪ್ರಧಾನಿ ರೋಡ್ ಶೋ ಮಾಡಿದ್ದ ರಸ್ತೆಗಳಲ್ಲಿ ಗೋ ಮೂತ್ರ, ನೀರು ಹಾಕಿ ಸ್ವಚ್ಛಗೊಳಿಸಿದ ಸಿದ್ದರಾಮಯ್ಯ ಅಭಿಮಾನಿ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ರೋಡ್ ಶೋ ನಡೆಸಿದ್ದರು. ಪ್ರಧಾನಿ ಮೋದಿ ರೋಡ್ ಶೋ ನಡೆಸಿದ ರಸ್ತೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿ ಕಂಸಾಳೆ ರವಿ ಗೋಮೂತ್ರದಿಂದ ಸ್ವಚ್ಛಗೊಳಿಸಿದ ಘಟನೆ ಇಂದು ಭಾನುವಾರ ನಡೆದಿದೆ.