ರಾಜ್ಯಹುಬ್ಬಳ್ಳಿ: ಮೋದಿ ಭೇಟಿ ಹಿನ್ನೆಲೆ; ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯ ಮನವಿ ತಿರಸ್ಕಾರ
ಇಲ್ಲಿನ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅನುಮತಿ ನಿರಾಕರಿಸಿದೆ. ಇತ್ತೀಚಿಗೆ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಲಾದ ಈದ್ಗಾ ಮೈದಾನದಲ್ಲಿ ಹೋಳಿ ಆಚರಣೆಗಾಗಿ ಮೂರ್ತಿ ಪ್ರತಿಷ್ಠಾಪನೆಗೆ ಗಜಾನನ ಉತ್ಸವ ಮಹಾಮಂಡಳ ಅನುಮತಿ ಕೋರಿತ್ತು.