ದೇಶಸಿಎಎ ಪ್ರತಿಭಟನೆಯಲ್ಲಿ ಬಾಗವಹಿಸಿದ್ದ ಪೋಲಿಷ್ ವಿದ್ಯಾರ್ಥಿಗೆ ಭಾರತವನ್ನು ತೊರೆಯುವಂತೆ ಸೂಚನೆ
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ ಜಾದವ್ಪುರ್ ವಿಶ್ವವಿದ್ಯಾಲಯದ ಪೋಲಿಷ್ ವಿದ್ಯಾರ್ಥಿಯನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ದೇಶವನ್ನು ತೊರೆಯುವಂತೆ ಕೇಳಿದೆ ಎಂದು ವಿಶ್ವವಿದ್ಯಾನಿಲಯ ಮೂಲಗಳು ಭಾನುವಾರ ತಿಳಿಸಿವೆ.