ರಾಜ್ಯತಮಿಳಿನಿಂದ ಕನ್ನಡ ಹುಟ್ಟಿತು ಹೇಳಿಕೆ: ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು; 'ಥಗ್ ಲೈಫ್' ಬ್ಯಾನ್ ಗೆ ಒತ್ತಾಯ!
ಪ್ರತಿಭಟನೆ ನಡೆಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು. ಆ ಚಿತ್ರವನ್ನು ನಿಷೇಧಿಸಬೇಕು, ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.