ರಾಜ್ಯಕ್ರಿಕೆಟಿಗನಿಗೆ 60 ನಿಮಿಷದಲ್ಲಿ ವೀಸಾ: ವಿದೇಶಾಂಗ ಇಲಾಖೆಗೆ ಹೈಕೋರ್ಟ್ ಮೆಚ್ಚುಗೆ
ರಣಜಿ ಕ್ರಿಕೆಟ್ ಆಟಗಾರ ಕೆ ಸಿ ಕಾರಿಯಪ್ಪ ಅವರ ವೀಸಾಗೆ ಅಡ್ಡಿಯಾಗಿದ್ದ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ವಿತರಿಸಿದ 60 ನಿಮಿಷಗಳಲ್ಲೇ ಅವರ ವೀಸಾ ಒದಗಿಸಲು ಮುಂದಾದ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಕಾರ್ಯವೈಖರಿಗೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.