ದೇಶಜೆಯು ವಿದ್ಯಾರ್ಥಿ ರ್ಯಾಗಿಂಗ್ ಸಾವು: ಆರೋಪಿಗಳ ವಿರುದ್ಧ 'ಶಿಸ್ತು ಕ್ರಮ' ವಿಳಂಬಕ್ಕೆ ಶಿಕ್ಷಕರ ಸಂಘ ಅಸಮಾಧಾನ!
ಜಾದವ್ಪುರ ವಿಶ್ವವಿದ್ಯಾನಿಲಯದ ಸ್ನಾತಕಪೂರ್ವ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್ ವೇಳೆ ಹಾಸ್ಟೆಲ್ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದು ಮೂರು ತಿಂಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ವಿಶ್ವವಿದ್ಯಾಲಯ 'ಶಿಸ್ತು ಕ್ರಮ' ತೆಗೆದುಕೊಂಡಿಲ್ಲ ಎಂದು ಶಿಕ್ಷಕರ ಸಂಘ ಕಳವಳ ವ್ಯಕ್ತಪಡಿಸಿದೆ.