ದೇಶಅಸ್ಸಾಂ ದೋಣಿ ದುರಂತ: ಬ್ರಹ್ಮಪುತ್ರ ನದಿಯಲ್ಲಿ ಮುಂದುವರೆದ ಕಾರ್ಯಾಚರಣೆ, ರಾಷ್ಟ್ರಪತಿ ಕೋವಿಂದ್ ಸಂತಾಪ
ಭೀಕರ ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ದೇಶ ಈಗಾಗಲೇ ನಲುಗುತ್ತಿದ್ದು. ಇದರ ನಡುವೆ ಇದೀಗ ಅಸ್ಸಾಂನಲ್ಲಿ ದೋಣಿ ದುರಂತ ಸಂಭವಿಸಿದೆ. ಬ್ರಹ್ಮಪುತ್ರ ನದಿಯಲ್ಲಿ 2 ಬೋಟ್ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಜನರು ನಾಪತ್ತೆಯಾಗಿದ್ದು, ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.