Jetlag pub

ಜೆಟ್ ಲ್ಯಾಗ್ ಪಬ್ ಪಾರ್ಟಿ ಪ್ರಕರಣ- 'ಕಾಟೇರ' ತಂಡ ಇಂದು ವಿಚಾರಣೆಗೆ ಬಾರದಿದ್ದರೆ ಪೊಲೀಸರಿಂದ ಮತ್ತೆ ನೊಟೀಸ್ ಜಾರಿ
'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪ ಮೇಲೆ ಈಗಾಗಲೇ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದು ಇಂದು ಮಂಗಳವಾರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

ಮಧ್ಯರಾತ್ರಿ ನಂತರವೂ ಚಿತ್ರತಂಡ ಪಾರ್ಟಿ ಮಾಡಿದೆ, ಆದರೆ ಡ್ರಗ್ಸ್ ಬಳಕೆಯಾಗಿಲ್ಲ: ಬೆಂಗಳೂರು ಉತ್ತರ ಡಿಸಿಪಿ ಸೈದುಲು ಅಡಾವತ್
ರಾಜಧಾನಿಯ ಜೆಟ್ ಲ್ಯಾಗ್ ರೆಸ್ಟೋಬಾರ್ ನಲ್ಲಿ ರಾತ್ರಿಪೂರ್ತಿ ಸ್ಟಾರ್ ನಟ ಮತ್ತು ಅವರ ಚಿತ್ರತಂಡದವರು ಅವಧಿ ಮೀರಿ ಪಾರ್ಟಿ ಮಾಡಿರುವ ಆರೋಪದ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.

