ರಾಜಕೀಯಮರಳು ಮಾಫಿಯಾದಿಂದ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಜೆಡಿಎಸ್ ಶಾಸಕಿ ಮನವಿ
ಅಕ್ರಮ ಮರಳು ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಗುರುವಾರ ವಿಧಾನಸಭೆಯಲ್ಲಿ ಅಳಲು ತೋಡಿಕೊಂಡರು. ತಮ್ಮ ಮೇಲೆ ಲಾರಿ ಹರಿದು ಸಾಯಿಸುತ್ತೇನೆ. ತದನಂತರ ಆರು ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಮಾಜಿ ಶಾಸಕರು ತಪ್ಪು ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.