ದೇಶಗೋರಕ್ ಪುರ ಬಳಿಕ ಜಾರ್ಖಂಡ್ ಸರದಿ: ಜೆಮ್ ಶೆಡ್ ಪುರ ಎಂಜಿಎಂ ಆಸ್ಪತ್ರೆಯಲ್ಲಿ 52 ಶಿಶುಗಳ ಸಾವು!
ಗೋರಕ್ ಪುರ ಆಸ್ಪತ್ರೆ ದುರಂತ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಅಂತಹುದೇ ಸರಣಿ ಸಾವಿನ ದುರಂತ ಜಾರ್ಖಂಡ್ ನಲ್ಲೂ ಕೇಳಿಬಂದಿದ್ದು, ಜೆಮ್ ಶೆಡ್ ಪುರದ ಮಹಾತ್ಮ ಗಾಂಧಿ ಮೆಮೋರಿಯಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 52 ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.