Jammu and Kahmir

ಜಮ್ಮು-ಕಾಶ್ಮೀರ: ದೋಡಾದಲ್ಲಿ ಕಡಿಮೆ ತೀವ್ರತೆಯ ಸ್ಫೋಟ, ಇಬ್ಬರ ಬಂಧನ!
ಜಾಮಿಯಾ ಮಸೀದಿ ಬಳಿಯ ದುಮ್ರಿ-ತುಕರ್ ಮೊಹಲ್ಲಾ ಪ್ರದೇಶದಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಜಮ್ಮು-ಕಾಶ್ಮೀರ: ಕಿಶ್ತ್‌ವಾರದಲ್ಲಿ ಮೇಘಸ್ಫೋಟ; ಯೋಧರು ಸೇರಿ 46 ಮಂದಿ ಸಾವು; 50 ಜನ ನಾಪತ್ತೆ
ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ವಿಪತ್ತು ಸಂಭವಿಸಿದೆ, ಅಲ್ಲಿ ಯಾತ್ರಾರ್ಥಿಗಳ ಭಾರೀ ದಟ್ಟಣೆ ಮತ್ತು ನಿರಂತರ ಮಳೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

Operation Shivshakti: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಹತ್ಯೆ
ಇಂದು ನಸುಕಿನ ಜಾವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿರುವುದಾಗಿ ತಿಳಿಸಿದೆ.

ಭಯೋತ್ಪಾದಕರ ಹೇಡಿತನದ ಕೃತ್ಯ: ರಜೆಯಲ್ಲಿದ್ದ ನಿರಾಯುಧ ಭಾರತೀಯ ಯೋಧನ ಮೇಲೆ ಗುಂಡಿನ ದಾಳಿ!
ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಟೆರಿಟೋರಿಯಲ್ ಆರ್ಮಿ ಯೋಧನನ್ನು ಮುಷ್ತಾಕ್ ಅಹ್ಮದ್ ಸೋಫಿ ಅವರ ಪುತ್ರ ಡೆಲ್ಹೇರ್ ಮುಷ್ತಾಕ್ ಎಂದು ಗುರುತಿಸಲಾಗಿದೆ.

ಜಮ್ಮು: ಸೇನಾ ಬೆಂಗಾವಲು ಪಡೆ ಮೇಲೆ ದಾಳಿ; ಓರ್ವ ಉಗ್ರನ ಹತ್ಯೆ
"ಶಸ್ತ್ರಾಸ್ತ್ರದೊಂದಿಗೆ ಒಬ್ಬ ಭಯೋತ್ಪಾದಕನ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ಸೇನೆ ತಿಳಿಸಿದೆ.

ಕಾಶ್ಮೀರದ ಬಗ್ಗೆ ಖರ್ಗೆ ಹೇಳಿಕೆ ನಾಚಿಕೆಗೇಡು; ಇದು ಕಾಂಗ್ರೆಸ್‌ನ 'ತುಕ್ಡೆ-ತುಕ್ಡೆ' ಮನಸ್ಥಿತಿ: ಪ್ರಧಾನಿ ಮೋದಿ ವಾಗ್ದಾಳಿ
ರಾಜಸ್ಥಾನದಲ್ಲಿ ನಡೆದ ರ್ಯಾಲಿ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೂ ಏನು ಸಂಬಂಧ ಎಂದು ಹೇಳಿಕೆ ನೀಡಿದ್ದು ಇದು ರಾಜಕೀಯ ಕಿಡಿ ಹೆಚ್ಚಿದೆ. ಖರ್ಗೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಮೋದಿ ಇಂದು ಕಾಂಗ್ರೆಸ್ ನ 'ತುಕ್ಡೆ ತುಕ್ಡೆ' ಮನಸ್ಥಿತಿ ಎಂದು ಕಿಡಿಕಾರಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ, ಬಿಗಿ ಭದ್ರತೆ!
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜಮ್ಮುವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ಮತ್ತು ಅರೆಸೇನಾ ಪಡೆಗಳು ನಗರ ಮತ್ತಿತರ ಕಡೆಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

ಜಮ್ಮು-ಕಾಶ್ಮೀರ: ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ, ಇಬ್ಬರು ಯೋಧರು ಸೇರಿ ಐವರಿಗೆ ಗಾಯ
ಜಮ್ಮುವಿನ ಅರ್ನಿಯಾ ಮತ್ತು ಆರ್ಎಸ್ ಪುರ ಸೆಕ್ಟರ್ಗಳ ಅಂತಾರಾಷ್ಟ್ರೀಯ ಗಡಿ (ಐಬಿ) ಯಲ್ಲಿರುವ ಐದು ಬಿಎಸ್ಎಫ್ ಪೋಸ್ಟ್ಗಳ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು, ಮೂವರು ನಾಗರೀಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಕ್ರಮಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹವಾಗುವ ಹಂತದಲ್ಲಿದೆ: ಕೇಂದ್ರ ಸಚಿವ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ಕ್ರಮಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ...

