ರಾಜ್ಯಬಜೆಟ್ನಲ್ಲಿ ಘೋಷಿಸಿದ ಶೇ. 95ರಷ್ಟು ಯೋಜನೆಗಳಿಗೆ ಆದೇಶ ಹೊರಡಿಸಲಾಗಿದೆ- ಸಿಎಂ ಬೊಮ್ಮಾಯಿ
ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಲ್ಲಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳ ನಿರಂತರ ವಾಗ್ದಾಳಿಯಿಂದ ವಿಚಲಿತರಾಗದ ಸಿಎಂ, ಬಜೆಟ್ ಪ್ರಸ್ತಾವನೆ ಅನುಷ್ಠಾನಗೊಳಿಸುವತ್ತ ಗಮನಹರಿಸುತ್ತಿದ್ದಾರೆ.