ರಾಜ್ಯಅಂಕೋಲಾ ಹೆದ್ದಾರಿ ಕುಸಿತ ದುರಂತ; IRB ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ರೋಶ
ಮಂಗಳೂರು- ಪಣಜಿ ರಾಷ್ಟ್ರೀಯ ಹೆದ್ದಾರಿ- 66 ಇದಾಗಿದ್ದು, ಇಲ್ಲಿ ಐಆರ್ಬಿ ಕಂಪೆನಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿತ್ತು. ರಸ್ತೆ ಅಗಲೀಕರಣಕ್ಕಾಗಿ ಪಕ್ಕದ ಗುಡ್ಡವನ್ನು ಅಗೆದು ಹಾಗೇ ಬಿಡಲಾಗಿತ್ತು. ದೊಡ್ಡ ಗುಡ್ಡ ಅಗೆದಿದ್ದರಿಂದ ಭಾರೀ ಮಳೆಯಿಂದ ಸಡಿಲಗೊಂಡು ಕುಸಿದಿದೆ. ಇದರಿಂದ ಕೆಳ ಭಾಗದಲ್ಲಿದ್ದ ಮನೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದ್ದು ಅಲ್ಲಿದ್ದ ಐವರು ಸಿಲುಕಿದ್ದರು ಎನ್ನಲಾಗಿದೆ.