ವಿದೇಶಪಿಎನ್ಬಿ ಹಗರಣ: ನೀರವ್ ಮೋದಿ ಪತ್ನಿ ವಿರುದ್ಧ ಇಂಟರ್ಪೋಲ್ ವಾರಂಟ್ ಜಾರಿ
2 ಬಿಲಿಯನ್ ಯುಎಸ್ ಡಾಲರ್ ಪಿಎನ್ಬಿ ಬ್ಯಾಂಕ್ ವಂಚನೆ ಪ್ರಕರಣದ ಮುಖ್ಯ ಆರೋಪಿ ನೀರವ್ ಮೋದಿಯ ಪತ್ನಿ ಅಮಿ ಮೋದಿ ವಿರುದ್ಧ ಇಂಟರ್ಪೋಲ್ ಜಾಗತಿಕ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಜಾಗತಿಕ ಪೊಲೀಸ್ ಸಂಸ್ಥೆ 'ರೆಡ್ ನೋಟಿಸ್' ನೀಡಿದೆ ಎಂದು ಅವರು ಹೇಳಿದರು.