ದೇಶಏಳು ತಿಂಗಳ ನಂತರ ಕಾಶ್ಮೀರದಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಪುನಾರಂಭ
ಕಾಶ್ಮೀರದಲ್ಲಿ ಗುರುವಾರದಿಂದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಈ ಮೂಲಕ ಅಂತ್ಯವಾಗಿದೆ.