Interim budget 2024

ಇದು 'ವಿಕಸಿತ ಭಾರತ' ಬಜೆಟ್; ಸಮಾಜದ ಪ್ರತಿಯೊಂದು ವರ್ಗದ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ ಹಾಕುತ್ತದೆ: ಪ್ರಧಾನಿ ಮೋದಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಮಧ್ಯಂತರ ಬಜೆಟ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2024: ನಿರ್ಮಲಾ ಸೀತಾರಾಮನ್ 6ನೇ ಬಜೆಟ್ 56 ನಿಮಿಷಗಳಲ್ಲೇ ಮಂಡನೆ!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ ಸತತ ಆರನೇ ಬಜೆಟ್ ಅನ್ನು 56 ನಿಮಿಷಗಳಲ್ಲೇ ಮಂಡಿಸಿದರು. ಇದು ಅವರ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿದೆ.

ಕೇಂದ್ರ ಮಧ್ಯಂತರ ಬಜೆಟ್ 2024: ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಸೌಲಭ್ಯ ವಿಸ್ತರಣೆ ಪ್ರಸ್ತಾಪ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ಪ್ರಯೋಜನಗಳ ವಿಸ್ತರಣೆಯನ್ನು ಪ್ರಸ್ತಾಪಿಸಿದ್ದಾರೆ. ಸಾರ್ವಭೌಮ ಸಂಪತ್ತು ನಿಧಿಗಳಿಂದ ಮಾಡಿದ ಹೂಡಿಕೆಯನ್ನು ಈಗ ಮಾರ್ಚ್ 31, 2025 ರವರೆಗೆ ಒಂದು ವರ್ಷ ವಿಸ್ತರಿಸಲಾಗಿದೆ. ಸ್ಟಾರ್ಟ್ ಅಪ್ ಗಳಿಗೆ ಇದು ವರದಾನವಾಗಿದೆ ಎನ್ನಬಹುದು.

