ದೇಶದಾಖಲೆ ಬರೆದ ತೇಜಸ್ ಸ್ವದೇಶಿ ಯುದ್ದ ವಿಮಾನ; 'ಅರೆಸ್ಟ್ ಲ್ಯಾಂಡಿಂಗ್' ಪರೀಕ್ಷೆ ಯಶಸ್ವಿ!
ಡಿಆರ್ಡಿಒ ಮತ್ತು ಎಡಿಎ ಇಂದು ಗೋವಾದ ಕಡಲ ಕಿನಾರೆಯಲ್ಲಿ ಇದೇ ಮೊದಲ ಬಾರಿಗೆ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ನೇವಿ)ಅನ್ನು ಎನ್ಎಸ್ ಹನ್ಸಾ ನಲ್ಲಿ ತುರ್ತಾಗಿ ನಿಲುಗಡೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ. ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನಗಳ ನೌಕಾ ಆವೃತ್ತಿಯಾಗಿದೆ.