ದೇಶಈ ಬಾರಿಯ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ವೀಕ್ಷಕರ ಸಂಖ್ಯೆ ಶೇ.64ರಷ್ಟು ಕಡಿತ: ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಆದ್ಯತೆ
ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್ಗೆ ಪಾಸ್ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು.