ದೇಶನೌಕಪಡೆ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ ಹಡಗಿನಲ್ಲಿದ್ದ 15 ಭಾರತೀಯರ ರಕ್ಷಣೆ
ಭಾರತೀಯ ನೌಕಾಪಡೆಯ ಕಮಾಂಡೋಗಳು ಶುಕ್ರವಾರ ಉತ್ತರ ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಲೈಬೀರಿಯನ್ ಧ್ವಜವಿದ್ದ ಹಡಗನ್ನು ಹತ್ತಿದ್ದು, ಅದರಲ್ಲಿದ್ದ 15 ಭಾರತೀಯರನ್ನು ರಕ್ಷಿಸಿದ್ದಾರೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.